ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಸ್ಫುರದ್ರೂಪಿ ಬಾರ್ಬಿ ಡಾಲ್‌ಗೇನಾದರೂ ಜೀವ ಬಂದರೆ..?!

 1956ರ ಸಂದರ್ಭ. ಆಗೆಲ್ಲಾ ಆಟಿಕೆಯ ಮಕ್ಕಳ ಬೊಂಬೆಗಳಷ್ಟೇ ಮಾರುಕಟ್ಟೆಯಲ್ಲಿ ಲಭ್ಯವಿರುತ್ತಿದ್ದವು.
ಅಮೆರಿಕಾದ ರುತ್ ಹ್ಯಾಂಡ್ಲರ್ ಎಂಬವರ ಮಕ್ಕಳಾದ ಬಾರ್ಬರಾ ಮತ್ತು ಕೆನೆತ್ ಕಾಗದದಲ್ಲಿ ದೊಡ್ಡವರ ಚಿತ್ರಗಳಿಗೆ ಗೊಂಬೆಯ ರೂಪ ನೀಡಿ ಆಡುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ಅಂದಿನ ಮಾರುಕಟ್ಟೆಯಲ್ಲಿ ಈ ರೀತಿ ದೊಡ್ಡವರ ದೇಹದ ಮಕ್ಕಳ ಗೊಂಬೆಗಳು ಲಭ್ಯವಿರಲಿಲ್ಲ.

ರುತ್ ಹ್ಯಾಂಡ್ಲರ್ ಒಮ್ಮೆ ಜರ್ಮನಿಗೆ ತೆರಳಿದಾಗ ಅಲ್ಲಿನ ಬಿಲ್ವ್ ಲಿಲಿ ಎಂಬ ಗೊಂಬೆ ಅವರ ಕಣ್ಣಿಗೆ ಬಿತ್ತು. ಇದು ಮಕ್ಕಳಾಟಿಕೆಯ, ಆದರೆ ದೊಡ್ಡವರ ದೇಹ ಹೊಂದಿದ ಗೊಂಬೆಯಾಗಿತ್ತು. ಅಮೆರಿಕಾದಲ್ಲೂ ಇಂಥ ಗೊಂಬೆಗಳು ತಯಾರಾಗಬೇಕೆಂದು ನಿರ್ಧರಿಸಿ ಮಾಟೆಲ್ ಎಂಬ ಕಂಪನಿಯ ನಿರ್ದೇಶಕರಲ್ಲಿ ರುತ್ ಹ್ಯಾಂಡ್ಲರ್ ಅನುಮತಿ ಪಡೆದುಕೊಂಡರು. ಬಾರ್ಬಿ ಡಾಲ್ ಹುಟ್ಟಿಕೊಂಡಿದ್ದು ಹೀಗೆ.


ಆದರೆ ಬಾರ್ಬಿ ಅನ್ನೋ ನಿರ್ಜೀವ ಗೊಂಬೆಗೆ ಜೀವ ಬಂದರೆ ಹ್ಯಾಗಿರುತ್ತೆ?! ಅಸಲಿಗೆ ಬಾರ್ಬಿಯನ್ನೇ ಹೋಲುವ ಸ್ಫರದ್ರೂಪಿ ಯುವತಿಯೊಬ್ಬಳಿದ್ದಾಳೆ. ವೆಲೆರಿಯಾ ಲುಕ್ಯಾನೋವಾ ಅವಳ ಹೆಸರು. ಈಕೆಯ ಪಕ್ಕದಲ್ಲೊಂದು ಗೊಂಬೆಯಿಟ್ಟರೆ ಗೊಂಬೆಯಾವುದು ಅಸಲಿ ಹುಡುಗಿ ಯಾವುದು ಅಂತಲೇ ಡೌಟ್ ಬರೋಹಾಗೆ ಪಕ್ಕಾ ಬಾರ್ಬಿಯ ರೀತಿಯಲ್ಲೇ ವೆಲೆರಿಯಾ ಕಾಣಿಸುತ್ತಾಳೆ. ನಮ್ಮ ಊರಿನ ಹುಡುಗರ ಕಣ್ಣಿಗೇನಾದರೂ ಈ ಹುಡುಗಿ ಸಿಕ್ಕಿಬಿಟ್ಟಾಳು ಅನ್ನಿ; ತನ್ನ ಲವ್ವರ್ಗಳಿಗೆಲ್ಲಾ ಟಾಟಾ ಹೇಳಿಬಿಟ್ಟಾರು ಹುಡುಗ್ರು ಹಾಗಿದ್ದಾಳೆ ರಿಯಲ್ ಬಾರ್ಬಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು